
ಬೆಂಗಳೂರಿನ ಬಿಇಎಂಎಲ್ನಲ್ಲಿ ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು ನಿರ್ಮಾಣ
ಮುಂಬೈ–ಅಹಮದಾಬಾದ್ ಹೈಸ್ಪೀಡ್ ಮಾರ್ಗಕ್ಕಾಗಿ ತಯಾರಾಗುತ್ತಿರುವ ಈ ರೈಲು ಗಂಟೆಗೆ 249 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ಭಾರತದಲ್ಲೇ ತಯಾರಾದ ಮೊದಲ ಬುಲೆಟ್ ರೈಲನ್ನು ಬೆಂಗಳೂರಿನ ಬಿಇಎಂಎಲ್ ಘಟಕದಲ್ಲಿ ನಿರ್ಮಿಸಲಾಗುತ್ತಿದೆ. ಭಾರತದ ಪರಿಸ್ಥಿತಿಗಳಿಗೆ ತಕ್ಕಂತೆ, ಪ್ರಯಾಣಿಕರ ಆರಾಮ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟು ಇದನ್ನು ವಿನ್ಯಾಸಗೊಳಿಸಲಾಗಿದೆ.
ರೈಲಿನ ಗರಿಷ್ಠ ಪರೀಕ್ಷಾ ವೇಗ ಗಂಟೆಗೆ 280 ಕಿ.ಮೀ ಮತ್ತು ಕಾರ್ಯಾಚರಣಾ ವೇಗ 249 ಕಿ.ಮೀ. ಸುಮಾರು 202 ಮೀಟರ್ ಉದ್ದದ ಈ ರೈಲಿನಲ್ಲಿ 4 ಮೋಟಾರ್ ಕಾರ್ಗಳು ಮತ್ತು 4 ಟ್ರೈಲರ್ ಕಾರ್ಗಳು ಸೇರಿ 8 ಬೋಗಿಗಳಿದ್ದು, ಸುಮಾರು 557 ಪ್ರಯಾಣಿಕರು ಪ್ರಯಾಣಿಸಬಹುದು.
ಏಳು ಸ್ಟ್ಯಾಂಡರ್ಡ್ ಕ್ಲಾಸ್ ಬೋಗಿಗಳಲ್ಲಿ 3×2 ಆಸನ ವ್ಯವಸ್ಥೆ ಮತ್ತು ಒಂದು ಎಕ್ಸಿಕ್ಯೂಟಿವ್ ಬೋಗಿಯಲ್ಲಿ 2×2 ಆಸನಗಳಿವೆ. ದಿವ್ಯಾಂಗರಿಗೆ ಅನುಕೂಲಕರ ಆಸನಗಳು, ಎಲ್ಇಡಿ ದೀಪಗಳು, ಲ್ಯಾಪ್ಟಾಪ್–ಮೊಬೈಲ್ ಚಾರ್ಜಿಂಗ್ ಸೌಲಭ್ಯ ಹಾಗೂ ಬಯೋ-ಡೈಜೆಸ್ಟರ್ ಶೌಚಾಲಯಗಳು ಇರಲಿವೆ.
ಭವಿಷ್ಯದಲ್ಲಿ ಎರಡು 8 ಬೋಗಿಗಳ ರೈಲುಗಳನ್ನು ಜೋಡಿಸಿ 16 ಬೋಗಿಗಳ ರೈಲಾಗಿ ಓಡಿಸಲೂ ಅವಕಾಶವಿದೆ.
ಮೂಲ: ಪತ್ರಿಕಾ ಮಾಹಿತಿ ಕಚೇರಿ (PIB), ಭಾರತ ಸರ್ಕಾರ. ಚಿತ್ರ: PIB.



Comments0
Loading comments…