
ಕೋಲಾರ ಓಪನ್ 2026: ಜಿಯಾನ್ ಹಿಲ್ಸ್ನಲ್ಲಿ ಚೊಚ್ಚಲ ವೃತ್ತಿಪರ ಪ್ರಶಸ್ತಿ ಗೆದ್ದ ಮೊಹಮ್ಮದ್ ಅಜರ್
ಕೋಲಾರ ಸಮೀಪದ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ ನಡೆದ ₹1 ಕೋಟಿ ಮೊತ್ತದ 2ನೇ ಆವೃತ್ತಿಯ ಕೋಲಾರ ಓಪನ್ 2026 ಪ್ರೊಫೆಷನಲ್ ಗಾಲ್ಫ್ ಟೂರ್ನಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನಾಲ್ಕು ದಿನಗಳ ಕಾಲ ನಡೆದ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೈದರಾಬಾದ್ನ ಗಾಲ್ಫರ್ ಮೊಹಮ್ಮದ್ ಅಜರ್, ತಮ್ಮ ವೃತ್ತಿಜೀವನದ ಚೊಚ್ಚಲ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದಾರೆ. ದೇಶ ವಿದೇಶಗಳ ಪ್ರಮುಖ ಗಾಲ್ಫ್ ಆಟಗಾರರ ಸವಾಲನ್ನು ಮೆಟ್ಟಿ ನಿಂತ ಅಜರ್, ಶೌರ್ಯ ಭಟ್ಟಾಚಾರ್ಯ ಹಾಗೂ ಸಪ್ತಕ್ ತಲ್ವಾರ್ ಅವರಂತಹ ಪ್ರಮುಖ ಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದರು.
ಡಿಪಿ ವರ್ಲ್ಡ್ ಪಿಜಿಟಿಐ (ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ) ಹಾಗೂ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸಿದ್ದವು. ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಕೋಲಾರ ಜಿಲ್ಲೆಯಲ್ಲಿ ಭಾಗವಹಿಸಿರುವುದು ಸ್ಥಳೀಯ ಕ್ರೀಡಾ ಪ್ರಿಯರಲ್ಲಿ ಉತ್ಸಾಹ ಮೂಡಿಸಿದೆ. ಇಂತಹ ದೊಡ್ಡ ಮಟ್ಟದ ಕ್ರೀಡಾ ಪಂದ್ಯಾವಳಿಗಳು ಕೋಲಾರದಲ್ಲಿ ಆಯೋಜನೆಯಾಗುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಚಾಲನೆ ಸಿಗಲಿದೆ ಎಂದು ಸ್ಥಳೀಯ ಸಂಘಟಕರು ತಿಳಿಸಿದ್ದಾರೆ.


